२६. गंगा ಗಂಗಾ ನದಿ Read Kannada - River Ganges

Kannada through Hindi, Learn Kannada, Kannada tutorials
Kannada through Hindi

Read Kannada - River Ganges

                              ಗಂಗಾ ನದಿ

ಗಂಗಾ ನದಿ ಭಾರತ ದೇಶದ ಪ್ರಮುಖ ನದಿ ಇದೆ. ಈ ನದಿಯು ಹಿಂದೂ ಜನರಿಗೆ ಅತಿಪವಿತ್ರ ನದಿ. ಪುರಾಣಗಳಲ್ಲಿ ಗಂಗಾ ನದಿಗೆ 'ದೇವನದಿ' ಎಂದು ವರ್ಣಿಸಲಾಗಿದೆ. ಭಾರತದಲ್ಲಿ ಈ ನದಿಯ ಪೂಜೆ ಮಾಡುತ್ತಾರೆ. ಪವಿತ್ರವಾದ ಗಂಗೋತ್ರಿ ಗಂಗಾ ನದಿಯ ಉಗಮ ಸ್ಥಳ. ಮುಂದೆ ೨೫೨೫ ಕಿ.ಮೀ.ದೂರವನ್ನು ಕ್ರಮಿಸಿ ಬಾಂಗ್ಲಾ ದೇಶದಲ್ಲಿ ಬಂಗಾಳ ಕೊಲ್ಲಿಯಲ್ಲಿ ಸೇರುತ್ತದೆ. ಈ ನದಿಯ ಮಾರ್ಗದ್ಲಲಿ ಹರಿದ್ವಾರ, ಪ್ರಯಾಗ (ಇಲಹಾಬಾದ), ವಾರಾಣಸಿ (ಕಾಶಿ) ಕ್ಷೇತ್ರಗಳು ಇವೆ. ಪ್ರಯಾಗದಲ್ಲಿ ಯಮುನಾ ಮತ್ತು ಗಂಗಾ ನದೀಗಳ ಸಂಗಮವಿದೆ. ಇದು ಹಿಂದುಗಳಿಗೆ ಅತಿ ಪವಿತ್ರ ಕ್ಷೇತ್ರ. ಕಾಶಿ ನಗರಿಗೆ ಮೋಕ್ಷಪುರಿ ಎನ್ನುತ್ತಾರೆ. ಕಾಶಿವಿಶ್ವೇಶ್ವರನ ದರ್ಶನ ಮಾಡಿದರೆ ಮೋಕ್ಷ ಪ್ರಾಪ್ತಿ ಆಗುತ್ತದೆ. ಇಂತಹ ಪವಿತ್ರ ನದಿಯ ದರ್ಶನ ಜನ್ಮದಲ್ಲಿ ಒಂದುಸಾರಿ ಮಾಡಲೇ ಬೇಕು. ಪವಿತ್ರ ಪ್ರಯಾಗ ಮತ್ತು ಕಾಶೀಕ್ಷೇತ್ರಕ್ಕೆ ಹೋಗಲೇ ಬೇಕು. ಇದೆ ಪ್ರಾರ್ಥನೆ.


पीछे: संबंध/रिश्ते                                             आगे: बेगळुरु